Skip Navigation

DVD Ilustrado Multilíngue

The Biology of Prenatal Development


8 - 12 Semanas


ಪ್ರಸವ ಪೂರ್ವ ಬೆಳವಣಿಗೆ ಜೀವಶಾಸ್ತ್ರ

.ಕನ್ನಡ [Kannada]


 

Baixar Versão em PDF  O Que é PDF?
 

O Período Fetal (8 semanas até o Nascimento)

Capítulo 37   9 Semanas: Engole, Suspira e se Estica

ಭ್ರೂಣದ ಅವಧಿಯು ಜನನದವರೆಗೂ ಮುಂದುವರೆಯುವುದು.

9 ವಾರಗಳ ವೇಳೆಗೆ ಹೆಬ್ಬೆರೆಳು ಚೀಪುವುದು ಆರಂಭವಾಗುವುದು ಹಾಗೂ ಭ್ರೂಣವು ಆಮ್ನಿಯೋಟಿಕ್ ಲೋಳೆಯನ್ನು ಸೇವಿಸಬಲ್ಲದಾಗಿರುತ್ತದೆ.

ಭ್ರೂಣವು ಯಾವುದೇ ವಸ್ತುವನ್ನು ಗ್ರಹಿಸಬಲ್ಲುದಾಗಿದೆ, ಶಿರವನ್ನು ಹಿಂದೆ ಮುಂದೆ ಚಲಿಸಬಲ್ಲುದಾಗಿದೆ, ದವಡೆ, ನಾಲಗೆಯನ್ನು ಚಲಿಸಬಲ್ಲುದು, ನಿಟ್ಟುಸಿರು ಬಿಡುವುದು ಹಾಗೂ ಚಾಚುವುದು.

ಮುಖದಲ್ಲಿನ ಹಸ್ತದ ಮುಂಗೈಯಲ್ಲಿನ ನರಗಳು, ಕಾಲಿನ ಹಿಮ್ಮಡಿಗಳು ಲಘು ಸ್ಪರ್ಶವನ್ನು ಅನುಭವಿಸಬಲ್ಲುದು.

"ಕಾಲಿನ ಹಿಮ್ಮಡಿಯ ಲಘು ಸ್ಪರ್ಶಕ್ಕೆ ಪ್ರತಿಯಾಗಿ", ಭ್ರೂಣವು ಸೊಂಟ, ಕಾಲನ್ನು ಬಾಗಿಸುವುದು ಹಾಗೂ ಕಾಲ್ಬೆರಳುಗಳನ್ನು ಮಡಿಸಬಹುದು.

ಕಣ್ಣುರೆಪ್ಪೆಗಳು ಈಗ ಸಂಪೂರ್ಣ ಮುಚ್ಚಿರುವುದು

ಧ್ವನಿ ಪೆಟ್ಟಿಗೆಯಲ್ಲಿ, ವಾಚಿಕ ಅಸ್ಥಿಬಂಧಕಗಳ ಕುರುಹುಗಳು ವಾಚಿಕ ತಂತುವಿನ ಬೆಳವಣಿಗೆಯನ್ನು ತೋರಬಲ್ಲವು.

ಹೆಣ್ಣು ಭ್ರೂಣದಲ್ಲಿ, ಗರ್ಭಾಶಯಗಳನ್ನು ಗುರುತಿಸಬಹುದು, ಅಪಕ್ವವಾದ ಸಂತಾನೋತ್ಪತ್ತಿ ಕೋಶಗಳಾದ ಊಗೋನಿಯವನ್ನು ನೋಡಬಹುದು, ಇವು ಅಂಡಾಶಯಗಳಲ್ಲಿ ಪುನರುತ್ಪತ್ತಿ ಆಗುತ್ತಿರುವುದು.

ಬಾಹ್ಯಾಂಗ ರಚನೆಯಲ್ಲಿ ಲಿಂಗ ಭೇದಗಳು ತಾನಾಗಿಯೇ ಗೋಚರಿಸುವುದು ಅದು ಹೆಣ್ಣೋ ಅಥವಾ ಗಂಡೋ ಎಂದು.

Capítulo 38   10 Semanas: Revira os olhos e Boceja, Unhas e Impressões Digitais

9 ರಿಂದ 10 ವಾರಗಳ ಮಧ್ಯದಲ್ಲಿ ಬೆಳವಣಿಗೆಯ ಆಸ್ಫೋಟದಿಂದಾಗಿ ದೇಹದ ಭಾರವು ಶೇ 75 ರಷ್ಟು ಹೆಚ್ಚುವುದು.

10 ವಾರದ ವೇಳೆಗೆ, ಮೇಲಿನ ಕಣ್ಣುರೆಪ್ಪೆಯ ಪ್ರೇರಣೆಯಿಂದ ಕಣ್ಣು ಕೆಳಗೆ ಹೊರಳುವುದನ್ನು ನೋಡಬಹುದು.

ಭ್ರೂಣವು ಆಕಳಿಸುವುದು ಹಾಗೂ ಅನೇಕ ವೇಳೆ ಬಾಯಿಯನ್ನು ತೆರೆದು ಮುಚ್ಚುವುದು.

ಹೆಚ್ಚಿನ ಭ್ರೂಣವು ಬಲಗೈ ಬಲಗೈ ಹೆಬ್ಬೆರಳನ್ನು ಚೀಪುವವು.

ಹೊಕ್ಕಳುಬಳ್ಳಿಯಲ್ಲಿನ ಕರುಳಿನ ಭಾಗಗಳು, ಉದರದ ಗೂಡುಗಳಿಗೆ ಮರಳುವವು.

ಹೆಚ್ಚಿನ ಮೂಳೆಗಳಲ್ಲಿ ಅಸ್ಥಿ ನಿರ್ಮಾಣ ಕಾರ್ಯಗತವಾಗುವುದು.

ಕೈ ಬೆರಳು ಹಾಗೂ ಕಾಲ್ಬೆರಳುಗಳ ಉಗುರಿನ ಬೆಳವಣಿಗೆ ಪ್ರಾರಂಭಗೊಳ್ಳುವುದು.

ನಿಶೇಚನದ 10 ವಾರಗಳ ಬಳಿಕ ವಿಶಿಷ್ಟವಾದ ಬೆರಳಚ್ಚುಗಳು ಗೋಚರವಾಗುವವು. ಬದುಕಿನದ್ದುಕ್ಕೂ ವ್ಯಕ್ತಿಯನ್ನು ಗುರುತಿಸಲು ಈ ರಚನೆಯನ್ನು ಬಳಸಬಹುದು.

Capítulo 39   11 Semanas: Absorve Glicose e Água

11 ವಾರಗಳ ವೇಳೆಗೆ ಮೂಗು ಹಾಗೂ ತುಟಿಗಳು ಸಂಪೂರ್ಣವಾಗಿ ರೂಪುಗೊಳ್ಳುತ್ತವೆ. ದೇಹದ ಯಾವುದೇ ಇತರ ಭಾಗದಂತೆ, ಅವುಗಳ ರೂಪವು ಪ್ರತಿ ಹಂತದಲ್ಲು ಬದಲಾಗುವುದು ಮಾನವ ಜೀವನ ಚಕ್ರದಲ್ಲಿ.

ಕರುಳು, ಗ್ಲೂಕೋಸ್ ಹಾಗೂ ನೀರನ್ನು ಹೀರಲು ಪ್ರಾರಂಭಿಸುವುದು ಇದನ್ನು ಭ್ರೂಣವು ಸೇವಿಸುರುತ್ತದೆ.

ಲಿಂಗವು ನಿರ್ಧಾರವಾಗಿದ್ದರೂ ನಿಶೇಚನದ ಘಟ್ಟದಲ್ಲಿ, ಬಾಹ್ಯ ಲಿಂಗಾಂಗಳು ಈಗ ಸ್ಫುಟವಾಗಿರುವವು ಗಂಡು ಹಾಗೂ ಹೆಣ್ಣಿನ ಭೇದ ತಿಳಿಯುವುದು.
8 - 12 Semanas