| |
Capítulo 40 3 a 4 Meses (12 a 16 Semanas): Papilas Gustativas, Movimento de Mandíbula, Reflexo de Sucção, Percepção dos Primeiros Movimentos do Feto
|
| |
| 11 ಹಾಗೂ 12 ವಾರಗಳ ಮಧ್ಯದಲ್ಲಿ,
ಭ್ರೂಣದ ಭಾರವು ಶೇ 60 ರಷ್ಟು ಹೆಚ್ಚುವುದು.
12 ವಾರಗಳ ಅವಧಿಯು 3 ಹಂತದಲ್ಲಿನ
1ನೇ ಭಾಗದ ಅಂತ್ಯವನ್ನು ತೋರುತ್ತದೆ.
ಗರ್ಭಾವಸ್ಥೆಯ 3ನೇ ಒಂದು ಭಾಗ ಇದಾಗಿರುತ್ತದೆ.
|
| ಬಾಯಿಯೊಳಗೆ ರಸಗ್ರಂಥಿಗಳು ಸ್ಫುಟಗೊಳ್ಳುವವು.
|
| ಜನನ ವೇಳೆಗೆ, ರಸಗ್ರಂಥಿಗಳು
ನಾಲಗೆ ಹಾಗೂ ಬಾಯಿ ಮೇಲ್ಭಾಗದಲ್ಲಿ ಇರುವವು.
|
| ಕರುಳಿನ ಚಲನೆಯು 12 ವಾರಗಳಷ್ಟು ಮೊದಲೇ
ಗೋಚರಿಸುವುದು,
ಹಾಗೂ 6 ವಾರಗಳ ತನಕ ಮುಂದುವರೆಯುವುದು.
ಭ್ರೂಣ ಹಾಗೂ ನವಜಾತ ದೊಡ್ಡಕರುಳಿನಿಂದ
ವರ್ಜಿಸಲ್ಪಟ್ಟ ವಸ್ತುವನ್ನು
ಮೆಕೋನಿಯಮ್ ಎನ್ನುವರು.
ಅದರಲ್ಲಿ
ಪಚನಕಾರಿ ಕಿಣ್ವಗಳು,
ಪ್ರೋಟೀನ್ ಗಳು, ಹಾಗೂ ಸತ್ತಕೋಶಗಳಿರುತ್ತವೆ.
ಇವುಗಳು ಪಚನನಾಳದಿಂದ ವಿಸರ್ಜಿಸಿದ
ವಸ್ತುಗಳು.
|
| 12 ವಾರಗಳ ವೇಳೆಗೆ, ಮೇಲಿನ ಅವಯವದ
ಉದ್ದ
ದೇಹದ ಗಾತ್ರಕ್ಕನುಗುಣವಾಗ ಪ್ರಮಾಣಕ್ಕೆ
ತಲುಪಿರುತ್ತದೆ.
ಕೆಳಗಿನ ಅವಯವಗಳು
ತಮ್ಮ ಗರಿಷ್ಠ ಪ್ರಮಾಣವನ್ನು ತಲುಪಲು
ಹೆಚ್ಚಿನ ಸಮಯ ತೆಗೆದುಕೊಳ್ಳುತ್ತವೆ.
|
| ಬೆನ್ನು ಹಾಗೂ ಶಿರದ ಹಿಂಬದಿಯನ್ನು
ಹೊರತುಪಡಿಸಿ,
ಸಂಪೂರ್ಣ ಭ್ರೂಣದ ದೇಹವು ಲಘು ಸ್ಪರ್ಶಕ್ಕೆ
ಸ್ಪಂದಿಸುತ್ತದೆ.
|
| ಲಿಂಗ ಆಧಾರಿತ ಬೆಳವಣಿಗೆಯ ಭೇದಗಳು
ಮೊದಲ ಬಾರಿಗೆ ಗೋಚರಿಸುತ್ತವೆ.
ಉದಾಹರಣೆಗೆ, ಹೆಣ್ಣು ಭ್ರೂಣದ ದವಡೆಯ
ಚಲನೆಯು
ಗಂಡು ಭ್ರೂಣದ ಚಲನೆಗಿಂತ ಹೆಚ್ಚಾಗಿರುತ್ತದೆ.
|
| ಹಿಂದೆ ಹೇಳಿದ ಹಂಜರಿಕೆಯ ಸ್ಪಂದನಕ್ಕೆ
ವ್ಯತರಿಕ್ತವಾಗಿ,
ಬಾಯಿಯ ಬಳಿಯ ಉತ್ತೇಜನದಿಂದ
ಭ್ರೂಣವು ಆದಿಕ್ಕಿನೆಡೆ ತಿರುಗುವುದಲ್ಲದ
ಬಾಯಿಯನ್ನು ಕೂಡ ತೆರೆಯುವುದು.
ಈ ಪ್ರತಿಕ್ರಿಯೆಯನ್ನು ಮೂಲ ಪ್ರತಿಕ್ರಿಯೆ ಎನ್ನುವರು.
ಹಾಗೂ ಇದು ಜನನದ ನಂತರವು ಇರುವುದು,
ಈ ಮೂಲಕ ನವಜಾತ ಶಿಶುವು ತನ್ನ
ತಾಯಿಯ ಸ್ತನವನ್ನು ಪಡೆಯುವುದು
ಎದೆಹಾಲನ್ನು ಕುಡಿಯಲು.
|
| ಮುಖವು ಪಕ್ವವಾಗುತ್ತಾ ಹೋಗುವುದು
ಕೊಬ್ಬು, ಕೆನ್ನೆಯ ಭಾಗದಲ್ಲಿ ಸಂಗ್ರಹಿಸಿದಂತೆಲ್ಲ
ಹಲ್ಲಿನ ಬೆಳವಣಿಗೆಯು ಪ್ರಾರಂಭವಾಗುವುದು.
|
| 15 ವಾರಗಳ ವೇಳೆಗೆ ರಕ್ತ ರೂಪಿಸುವ ವಂಶ
ಕೋಶಗಳು ಕಾಣುವವು
ಹಾಗೂ ಎಲುಬಿನ ನೆಣದಲ್ಲಿ ಅಸಂಖ್ಯವಾಗಿ
ಬೆಳೆಯುವವು.
ಹೆಚ್ಚಿನ ರಕ್ತ ಕೋಶವು ಇಲ್ಲಿಯೆ ಘಟಿಸುವುದು.
|
| 6 ವಾರದ ಭ್ರೂಣದಲ್ಲಿ ಚಲನೆಯು
ಪ್ರಾರಂಭಗೊಂಡಿದ್ದರೂ,
ಗರ್ಭೀಣಿ ಸ್ತ್ರೀಯು ಭ್ರೂಣದ ಚಲನೆಯ
ಮೊದಲ ಸಂಕೇತವನ್ನು
14 ರಿಂದ 18 ವಾರಗಳ ಮಧ್ಯದಲ್ಲಿ
ಅನುಭವಿಸುವಳು.
ಸಾಂಪ್ರದಾಯಿಕವಾಗಿ, ಈ ಘಟನೆಯನ್ನು
ವೇಗ ವರ್ಧನೆ ಎನ್ನುವರು.
|