Skip Navigation

DVD Ilustrado Multilíngue

The Biology of Prenatal Development




ಪ್ರಸವ ಪೂರ್ವ ಬೆಳವಣಿಗೆ ಜೀವಶಾಸ್ತ್ರ

.ಕನ್ನಡ [Kannada]


 

Baixar Versão em PDF  O Que é PDF?
 

Capítulo 41   4 a 5 Meses (16 a 20 Semanas): Resposta ao Estresse, Verniz Caseoso, Ritmos Circadianos

16 ವಾರಗಳ ವೇಳೆಗೆ, ಕೆಲವು ಪದ್ಧತಿಗಳಾದ ಸೂಜಿಯನ್ನು ಭ್ರೂಣದ ಉದರ ಭಾಗಕ್ಕೆ ಚುಚ್ಚುವುದರಿಂದ ಹಾರ್ಮೋನ್ ಒತ್ತಡ ಪ್ರತಿಕ್ರಿಯೆಯನ್ನು ಉತ್ತೇಜಿಸಬಹುದಾಗಿದೆ ಇದರಿಂದ ನೊರಾಡ್ರಿನಾಲಿನ್, ಅಥವಾ ನೊರ್ ಪೈನ್ ಫ್ರೈನ್ ಗಳು ರಕ್ತವಾಹಿನಿಗೆ ಸೇರುವುದು. ನವಜಾತ ಶಿಶು ಹಾಗೂ ವಯಸ್ಕರು ಒಂದೇ ಬಗೆಯ ಪ್ರತಿಕ್ರಿಯೆಯನ್ನು ಆಕ್ರಮಕಾರಕ ಪದ್ಧತಿಗಳಿಗೆ ನೀಡುವರು.

ಶ್ವಾಸೋಚ್ಚ್ವಾಸದ ವ್ಯವಸ್ಥೆಯಲ್ಲಿ, ಶ್ವಾಸಕೋಶದ ರಚನೆಯು ಈಗ ಸಂಪೂರ್ಣವಾಗಿದೆ.

ರಕ್ಷಾಣಾತ್ಮಕ ಬಿಳಿವಸ್ತುವಾದ, ವರ್ನಿಕ್ಸ್ ಕೆಸೋಸವು, ಈಗ ಭ್ರೂಣವನ್ನು ಸುತ್ತುವರೆಯುವುದು. ವರ್ನಿಕ್ಸ್ ಚರ್ಮವನ್ನು ರಕ್ಷಿಸುವುದು ಚರ್ಮಕ್ಕೆ ಅಹಿತಕರ ಪರಿಣಾಮ ತರುವ ಆಮ್ನಿಯೋಟಿಕ್ ಲೋಳೆಯಿಂದ ರಕ್ಷಿಸುವುದು

19 ವಾರಗಳ ಭ್ರೂಣದ ಚಲನೆಯಿಂದ, ಉಸಿರಾಟದ ಚಟುವಟಿಕೆ, ಹಾಗೂ ಹೃದಯ ಬಡಿತಗಳು ದಿನನಿತ್ಯ ಪ್ರಾರಂಭಗೊಳ್ಳುವುದು ಇದನ್ನು ಸರ್ಕಾಡಿಯನ್ ಲಯ ಎಂದು ಕರೆಯುವರು.

Capítulo 42   6 a 7 Meses (24 a 28 Semanas): Reflexo Cócleo-Palpebral e de Sobressalto; Pupilas Respondem à Luz; Olfato e Paladar

20 ವಾರಗಳ ವೇಳೆಗೆ, ಕಿವಿಯ ಗೂಡು, ಆಲಿಸಲು ಇರುವ ಅಂಗವು, ವಯಸ್ಕರ ಗಾತ್ರಕ್ಕೆ ತಲುಪುವುದು ಇದು ಒಳಗೆ ಪೂರ್ಣವಾಗಿ ಬೆಳೆಯುವ ಕಿವಿಯ ಭಾಗವಾಗಿರುವುದು. ಈ ನಂತರ, ಭ್ರೂಣದ ಪ್ರತಿಕ್ರಿಯೆಯು ವಿವಿಧ ಶ್ರೇಣಿಯ ಶಬ್ದಗಳಿಗೂ ಕೂಡಾ ತೆರೆದುಕೊಳ್ಳುವುದು.

ಕೂದಲು ತಲೆಯ ಮೇಲೆ ಬೆಳೆಯಲು ಪ್ರಾರಂಭಿಸುವುದು.

ಚರ್ಮದ ಪದರುಗಳು ಹಾಗೂ ರಚನೆಗಳು ಆಸ್ತಿತ್ತ್ವಕ್ಕೆ ಬರುವವು, ಇದರಲ್ಲಿ ರೋಮಚೀಲಗಳು ಹಾಗೂ ಗ್ರಂಥಿಗಳು ಇರುವವು.

ನಿಶೇಚನದ 20 ರಿಂದ 22 ವಾರಗಳ ವೇಳೆಗೆ ಶ್ವಾಕೋಶಗಳು ಗಾಳಿಯನ್ನು ಸ್ವಲ್ಪ ಉಸಿರಾಡುವಷ್ಟು ಶಕ್ತಿಯನ್ನು ಪಡೆಯುತ್ತವೆ. ಇದನ್ನು ಪ್ರಾಣಧಾರಣ ಸಾಮರ್ಥ್ಯ ಅವಧಿ ಎನ್ನುವರು ಏಕೆಂದರೆ, ಗರ್ಭದ ಹೊರಗೆ ಉಳಿಯುವ ಸಾಧ್ಯತೆಯು ಕೆಲವು ಭ್ರೂಣಕ್ಕೆ ಸಾಧ್ಯವಾಗುತ್ತದೆ. ದೀರ್ಘವಾದ ವೈದ್ಯಕೀಯ ಸಾಧನೆಗಳು ಈ ಜೀವಗಳು ಬದುಕುಳಿಯುವ ಸಾಧ್ಯತೆಯನ್ನು ಅಂದರೆ, ಅವಧಿಗೆ ಮುನ್ನ ಜನಿಸುವ ಶಿಶುಗಳು ಉಳಿಯುವಿಕೆ ಸಾಧ್ಯವಾಗಿದೆ.