| |
Desenvolvimento Embrionário: 6 a 8 Semanas
Capítulo 20 6 Semanas: Movimento e Sensação
|
| |
| 6ನೇ ವಾರದ ವೇಳೆಗೆ ಮೆದುಳಿನ ಅರ್ಧಗೋಳವು
ಬೆಳೆಯುತ್ತಿರುವುದು
ಮೆದುಳಿನ ಇತರೆ ಭಾಗಗಳಿಗೆ ಹೋಲಿಸಿದರೆ
ಇದು ಹೆಚ್ಚು ವೇಗವಾಗಿ ಬೆಳೆಯುವುದು.
ಭ್ರೂಣವು ಸ್ವಯಂಸ್ಫೂರ್ತಿಯ
ಹಾಗೂ ಪ್ರತಿಕ್ರಿಯಾತ್ಮಕ ಚಲನೆಯನ್ನು
ಪ್ರಾರಂಭಿಸುವುದು.
ಆ ಬಗೆಯ ಚಲನೆಯ ಅವಶ್ಯಕತೆಯ
ಸಾಧಾರಣ ನರ ಸ್ನಾಯುಗಳ ಬೆಳವಣಿಗೆಗೆ
ಉತ್ತೇಜನಕಾರಿಯಾಗಿದೆ.
|
| ಮೌಖಿಕ ಪ್ರದೇಶದ ಸ್ಪರ್ಶದಿಂದಾಗಿ ಭ್ರೂಣವು
ತನ್ನ ಶಿರವನ್ನು ಹಿಂದೆಗೆಯುವ
ಪ್ರಕ್ರಿಯೆಯನ್ನುಂಟು ಮಾಡುವುದು.
|
Capítulo 21 A Orelha Externa e a Formação de Célula Sanguínea
|
| |
| ಬಾಹ್ಯ ಕಿವಿಗಳು ಆಕಾರ ತಳೆಯಲಾರಂಭಿಸುವವು.
|
| 6 ವಾರಗಳ ವೇಳೆಗೆ,
ಯಕೃತ್ತಿನಲ್ಲಿ ರಕ್ತಕೋಶಗಳ ಉತ್ಪತ್ತಿ
ಕಾರ್ಯಗತವಾಗುವುದು
ಇಲ್ಲಿ ಮೇದಸ್ಸಿನ ಉಪಸ್ಥಿತಿ ಇರುವುದು.
ಈ ಬಗೆಯ ಬಿಳಿ ರಕ್ತ ಕೋಶವು
ರೋಗ ನಿರೋಧಕ ವ್ಯವಸ್ಥೆಯ ಬೆಳವಣಿಗೆಗೆ
ಪ್ರಮುಖವಾಗಿದೆ.
|
Capítulo 22 O Diafragma e os Intestinos
|
| ವಪೆಯು,
ಉಸಿರಾಟದಲ್ಲಿ ಬಳಸುವ ಪ್ರಾಥಮಿಕ
ಸ್ನಾಯುವಾಗಿದ್ದು,
6 ವಾರಗಳಲ್ಲಿ ವ್ಯಾಪಕವಾಗಿ ರೂಪುಗೊಳ್ಳುತ್ತದೆ.
|
| ಕರುಳಿನ ಒಂದು ಭಾಗ ತಾತ್ಕಾಲಿಕವಾಗಿ
ಹೊಕ್ಕಳು ಬಳ್ಳಿಯೆಡೆಗೆ ಚಾಚಿರುವುದು.
ಈ ಸಾಮಾನ್ಯ ಪ್ರಕ್ರಿಯೆಯನ್ನು ಶಾರೀರಿಕ
ಅಂಡವಾಯುಕರಣ ಎನ್ನುವರು,
ಇದು ಉದರ ಭಾಗದಲ್ಲಿ ಇತರ ಅಂಗಗಳ
ಬೆಳವಣಿಗೆಗೆ ಅನುವು ಮಾಡಿಕೊಡುತ್ತದೆ.
|
Capítulo 23 Placas da Mão e Ondas Cerebrais
|
| |
| ಸೂಕ್ಷ್ಮವಾದ ಚಪ್ಪಟೆತನವನ್ನು ಕೈ ಆಕೃತಿಗಳು
6 ವಾರಕ್ಕೆ ಬೆಳೆಸಿಕೊಳ್ಳುವವು.
|
| ಮೆದುಳು ತರಂಗಗಳು 6 ವಾರ ಹಾಗೂ
2 ದಿನಗಳ ವೇಳೆಗೆ ದಾಖಲಾಗುವವು.
|
Capítulo 24 Formação do Mamilo
|
| |
| ಮುಂಡದ ಎರಡು ಬದಿಗಳಲ್ಲಿ ಮೊಲೆಯ
ತೊಟ್ಟುಗಳು ಗೊಚರಿಸುವವು
ಇವು ತಮ್ಮ ಸಹಜ ಸ್ಥಾನವಾದ
ಎದೆಯ ಮುಂಭಾಗ ತಲುಪುವ ಸ್ವಲ್ಪ
ಮೊದಲು ಗೋಚರಿಸುವುದು.
|
Capítulo 25 Desenvolvimento dos Membros
|
| |
| 6 1 /2 ವಾರದ ವೇಳೆಗೆ, ಮೊಳಕೈ ಸ್ಫುಟಗೊಳ್ಳುವುದು,
ಬೆರಳುಗಳು ಪ್ರತ್ಯೇಕಗೊಳ್ಳುವುದು,
ಹಾಗೂ ಕರ ಚಾಲನೆಯನ್ನೂ ನೋಡಬಹುದು
|
| ಆಸಿಫಿಕೇಶನ್ ಎಂದು ಕರೆಯುವ ಮೂಳೆ
ನಿರ್ಮಾಣ ಕಾರ್ಯವು,
ಕಾಲ್ವಿಕಲ್ ನೊಳಗೆ,
ಅಥವಾ ಕಂಠದ ಮೂಳೆಯೊಳಗೆ ಆರಂಭವಾಗುವುದು,
ಹಾಗೂ ಅದೆ ರೀತಿ ಮೇಲಿನ, ಕೆಳಗಿನ
ದವಡೆಯ ಮೂಳೆಗಳಲ್ಲಿ ಆರಂಭವಾಗುವುದು
|
Capítulo 26 7 Semanas: Soluços e Resposta a Susto
|
| |
| 7ನೆ ವಾರದ ವೇಳೆಗೆ ಬಿಕ್ಕಳಿಕೆಯನ್ನು
ಗಮನಿಸಬಹುದು,
ಇದೀಗ ಕಾಲುಗಳ ಚಲನೆಯನ್ನು ನೋಡಬಹುದು,
ಜೊತೆಗೆ ಅಚ್ಚರಿಯ ಪ್ರತಿಕ್ರಿಯೆ ಇರುವುದು.
|
Capítulo 27 O Coração Desenvolvido
|
| |
| 4 ಗೂಡುಗಳುಳ್ಳ ಹೃದಯವು ಬಹುಮಟ್ಟಿಗೆ
ಸಂಪೂರ್ಣವಾಗಿರುತ್ತದೆ.
ಸರಾಸರಿ, ಈಗ ಹೃದಯವು ಪ್ರತಿ ನಿಮಿಷ
167 ಬಾರಿ ಬಡಿಯುವುದು.
7 1/2 ವಾರದಲ್ಲಿ ಹೃದಯದ ವಿದ್ಯುತ್
ರೀತಿಯ ಚಟುವಟಿಕೆ ದಾಖಲಾಗುತ್ತದೆ.
ವಯಸ್ಕರಲ್ಲಿ ಕಂಡುಬರುವ ರೀತಿಯ
ತರಂಗಗಳು ಕಂಡುಬರುತ್ತವೆ.
|
Capítulo 28 Ovários e Olhos
|
| |
| ಸ್ತ್ರೀ ಶಿಶುಗಳಲ್ಲಿ 7 ವಾರದ ವೇಳೆಗೆ
ಅಂಡಾಶಗಳನ್ನು ಗುರುತಿಸಬಹುದು.
|
| 7 1/2 ವಾರದ ವೇಳೆಗೆ ವರ್ಣಯುಕ್ತ
ಅಕ್ಷಿಪಟವನ್ನು ಕಣ್ಣಿನಲ್ಲಿ
ಸುಲಭವಾಗಿ ನೋಡಬಹುದು ಹಾಗೂ
ಕಣ್ಣು ರೆಪ್ಪೆಗಳು,
ವೇಗವಾಗಿ ಬೆಳೆಯುವ ಅವಧಿ ಪ್ರಾರಂಭವಾಗುವುದು.
|
Capítulo 29 Dedos das Mãos e dos Pés
|
| |
| ಬೆರಳುಗಳು ಪ್ರತ್ಯೇಕವಾಗುವವು
ಕಾಲ್ಬೆರೆಳುಗಳು ಕೇವಲ ಮೂಲದಲ್ಲಿ
ಕೂಡಿಕೊಂಡಿರುವವು.
|
| ಕೈಗಳು ಪರಸ್ಪರ ಹತ್ತಿರ ಬರಬಲ್ಲವು,
ಅದೇ ರೀತಿ ಕಾಲುಗಳು ಕೂಡ.
ಮೊಣಕಾಲು ಸಂದಿಗಳು ಸಹ ಗೋಚರಿಸಲಾರಂಭಿಸುತ್ತವೆ.
|